ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿರುವ ಯುವಜನರಿಗೆ ಸಿಹಿ ಸುದ್ದಿ!
ಪಶ್ವಿಮ ರೈಲ್ವೆ (Western Railway) ವತಿಯಿಂದ ಬೃಹತ್ ಪ್ರಮಾಣದಲ್ಲಿ ಅಪ್ರೆಂಟಿಸ್ ನೇಮಕಾತಿ ಪ್ರಕಟಿಸಲಾಗಿದೆ. 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆ 1961ರಡಿ ವಿವಿಧ ವೃತ್ತಿಗಳಿಗೆ ತರಬೇತಿ ನೀಡಲು ಒಟ್ಟು 5,349 ‘ಅಪ್ರೆಂಟಿಸ್’ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (Notification No. RRC/WR/04/2025) ಪ್ರಕಟವಾಗಿದೆ.
10ನೇ ತರಗತಿ ಉತ್ತೀರ್ಣರಾಗಿದ್ದು, ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ, ವಿಶೇಷವಾಗಿ Indian Railways ನಲ್ಲಿ ತರಬೇತಿ ಪಡೆಯುವುದು ಭವಿಷ್ಯದ ಉದ್ಯೋಗಾವಕಾಶಗಳಿಗೆ ಬಲವಾದ ಅಡಿಗಲ್ಲಾಗುತ್ತದೆ.
ರೈಲ್ವೆ ಅಪ್ರೆಂಟಿಸ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ರೈಲ್ವೆಯ ಲೆವೆಲ್-1 (ಗ್ರೂಪ್ ‘ಡಿ’) ನೇರ ನೇಮಕಾತಿಯಲ್ಲಿ CCAA ಅಭ್ಯರ್ಥಿಗಳಿಗೆ ಶೇಕಡ 20 ರಷ್ಟು ಮೀಸಲಾತಿ ಆದ್ಯತೆ ದೊರೆಯುತ್ತದೆ.
ಆಸಕ್ತರು ಪಶ್ಚಿಮ ರೈಲ್ವೆಯ ಅಧಿಕೃತ ವೆಬ್ಸೈಟ್ www.rrc-wr.com ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಪೂರ್ಣ ವಿವರಗಳು, ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ಹಂತಗಳ ಕುರಿತು ಸಂಪೂರ್ಣ ಮಾಹಿತಿ ಅಧಿಕೃತ ಅಧಿಸೂಚನೆಯಲ್ಲಿ ಲಭ್ಯವಿದೆ. ಒಟ್ಟು ಭರ್ತಿಗೆ ಪ್ರಕಟಿಸಿರುವ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ 5,349.
ಈ ನೇಮಕಾತಿ ಪ್ರಕ್ರಿಯೆ ಒಟ್ಟು 19 ವಿಭಿನ್ನ ಐಟಿಐ ವೃತ್ತಿಗಳಿಗೆ (ITI Trades) ಅನ್ವಯಿಸುತ್ತದೆ. ಅಂದರೆ, ವಿವಿಧ ತಾಂತ್ರಿಕ ಕ್ಷೇತ್ರಗಳಲ್ಲಿ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ತಮ್ಮ ಅರ್ಹತೆಗೆ ತಕ್ಕಂತೆ ಅರ್ಜಿ ಸಲ್ಲಿಸುವ ಅವಕಾಶ ಇದೆ. ಸಂಬಂಧಿತ ಟ್ರೇಡ್-ವಾರು ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಫಿಟ್ಟರ್ (Fitter)
ವೆಲ್ಡರ್ (Welder)
ಟರ್ನರ್ (Turner)
ಮೆಷಿನಿಸ್ಟ್ (Machinist)
ಕಾರ್ಪೆಂಟರ್ (Carpenter)
ಪೇಂಟರ್ – ಜನರಲ್ (Painter General)
ಡೀಸೆಲ್ ಮೆಕ್ಯಾನಿಕ್ (Diesel Mechanic)
ಮೆಕ್ಯಾನಿಕ್ ಮೋಟಾರ್ ವೆಹಿಕಲ್ (Mechanic Motor Vehicle)
ಪ್ರೋಗ್ರಾಮಿಂಗ್ ಅಂಡ್ ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ (PASSA) / COPA
ಎಲೆಕ್ಟ್ರಿಷಿಯನ್ (Electrician)
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (Electronics Mechanic)
ವೈರ್ಮ್ಯಾನ್ (Wireman)
ಮೆಕ್ಯಾನಿಕ್ ರೆಫ್ರಿಜರೇಷನ್ ಅಂಡ್ ಎಸಿ (Mechanic Refrigeration & AC)
ಪೈಪ್ ಫಿಟ್ಟರ್ (Pipe Fitter)
ಪ್ಲಂಬರ್ (Plumber)
ಡ್ರಾಫ್ಟ್ಸ್ಮ್ಯಾನ್ – ಸಿವಿಲ್ (Draftsman Civil)
ಸ್ಟೆನೋಗ್ರಾಫರ್ – ಇಂಗ್ಲಿಷ್ (Stenographer English)
ಫೋರ್ಜರ್ ಮತ್ತು ಹೀಟ್ ಟ್ರೀಟರ್ (Forger and Heat Treater)
ಮೆಷಿನಿಸ್ಟ್ – ಗ್ರೈಂಡರ್ (Machinist Grinder)
ಪ್ರಮುಖ ವಿಭಾಗಗಳು
ಈ ಅಪ್ರೆಂಟಿಸ್ ಹುದ್ದೆಗಳು Western Railway ವ್ಯಾಪ್ತಿಯಲ್ಲಿರುವ ಪ್ರಮುಖ ವಿಭಾಗಗಳು ಹಾಗೂ ಕಾರ್ಯಾಗಾರಗಳಲ್ಲಿ ಹಂಚಿಕೆ ಮಾಡಲಾಗಿದೆ. ಅವುಗಳಲ್ಲಿ ಮುಂಬೈ (BCT), ವಡೋದರಾ (BRC), ಅಹಮದಾಬಾದ್ (ADI), ರತ್ಲಾಮ್ (RTM), ರಾಜ್ಕೋಟ್ (RJT), ಭಾವನಗರ (BVP), ಪೇರೆಲ್ ವರ್ಕ್ಶಾಪ್ (PL W/SHOP), ಮಹಾಲಕ್ಷ್ಮಿ ವರ್ಕ್ಶಾಪ್ (MX W/SHOP) ಮತ್ತು ದಾಹೋಡ್ ವರ್ಕ್ಶಾಪ್ (DHD) ಪ್ರಮುಖವಾಗಿವೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಇಷ್ಟದ ಕೇವಲ ಒಂದು ವಿಭಾಗ (Division/Workshop)ವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಒಂದು ಬಾರಿ ಆಯ್ಕೆ ಮಾಡಿದ ವಿಭಾಗವನ್ನು ನಂತರ ಬದಲಾಯಿಸಲು ಅವಕಾಶ ಇರುವುದಿಲ್ಲ.
ಅರ್ಹತಾ ಮಾನದಂಡಗಳು (Eligibility Criteria)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ರೈಲ್ವೆ ಇಲಾಖೆ ನಿಗದಿಪಡಿಸಿರುವ ಶೈಕ್ಷಣಿಕ, ತಾಂತ್ರಿಕ ಹಾಗೂ ವಯೋಮಿತಿ ಸಂಬಂಧಿತ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು.
- ಶೈಕ್ಷಣಿಕ ಮತ್ತು ತಾಂತ್ರಿಕ ಅರ್ಹತೆ (Educational & Technical Qualifications):
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಮೆಟ್ರಿಕ್ಯುಲೇಷನ್ (10ನೇ ತರಗತಿ / SSLC) ಪರೀಕ್ಷೆಯಲ್ಲಿ ಕನಿಷ್ಠ ಶೇ. 50 ರಷ್ಟು ಒಟ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ತಾಂತ್ರಿಕ ಅರ್ಹತೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಯಸುವ ಸಂಬಂಧಿತ ಟ್ರೇಡ್ನಲ್ಲಿ NCVT ಮಾನ್ಯತೆ ಪಡೆದ ಐಟಿಐ (Industrial Training Institute) ಪ್ರಮಾಣಪತ್ರ ಹೊಂದಿರಬೇಕು. ಯಾವುದೇ ಕಾರಣಕ್ಕೂ ಇಂಜಿನಿಯರಿಂಗ್ ಪದವಿ ಪಡೆದವರು ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದವರು ಈ ಅಧಿಸೂಚನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
- ವಯೋಮಿತಿ (Age Limit):
ಅಭ್ಯರ್ಥಿಗಳ ವಯಸ್ಸನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕವಾದ 23/03/2026 ಅನ್ನು ಆಧಾರವಾಗಿ ತೆಗೆದುಕೊಂಡು ಲೆಕ್ಕ ಹಾಕಲಾಗುತ್ತದೆ.
ಕನಿಷ್ಠ ವಯಸ್ಸು: 15 ವರ್ಷಗಳು ಪೂರ್ಣಗೊಂಡಿರಬೇಕು.
ಗರಿಷ್ಠ ವಯಸ್ಸು: 24 ವರ್ಷಗಳನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ (Age Relaxation):
ಸರ್ಕಾರದ ನಿಯಮಾನುಸಾರ ವಿವಿಧ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ:
ಎಸ್ಸಿ (SC) ಮತ್ತು ಎಸ್ಟಿ (ST) ಅಭ್ಯರ್ಥಿಗಳಿಗೆ: 5 ವರ್ಷಗಳ ಸಡಿಲಿಕೆ.
ಓಬಿಸಿ (OBC – Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ.
ವಿಕಲಚೇತನ (PwBD) ಅಭ್ಯರ್ಥಿಗಳಿಗೆ: 10 ವರ್ಷಗಳ ಸಡಿಲಿಕೆ.
ಮಾಜಿ ಸೈನಿಕರಿಗೆ (Ex-Servicemen): ಗರಿಷ್ಠ 10 ವರ್ಷಗಳ ಸಡಿಲಿಕೆ (ರಕ್ಷಣಾ ಸೇವೆಯಲ್ಲಿ ಕಳೆದ ಅವಧಿ + 3 ವರ್ಷಗಳು, ನಿಯಮಾನುಸಾರ).
ವರ್ಗವಾರು ಜನ್ಮ ದಿನಾಂಕದ ಅರ್ಹತೆ (DOB Range):
ಸಾಮಾನ್ಯ ವರ್ಗ (UR): 24/03/2002 ರಿಂದ 23/03/2011ರ ನಡುವೆ ಜನಿಸಿರಬೇಕು.
SC/ST ಅಭ್ಯರ್ಥಿಗಳು: 24/03/1997 ರಿಂದ 23/03/2011ರ ನಡುವೆ ಜನಿಸಿರಬೇಕು.
OBC ಅಭ್ಯರ್ಥಿಗಳು: 24/03/1999 ರಿಂದ 23/03/2011ರ ನಡುವೆ ಜನಿಸಿರಬೇಕು.
ಅರ್ಜಿ ಶುಲ್ಕ (Application Fee)
ಸಾಮಾನ್ಯ (UR), EWS ಮತ್ತು OBC ವರ್ಗದ ಪುರುಷ ಅಭ್ಯರ್ಥಿಗಳಿಗೆ: ರೂ. 100/-
SC, ST, PwBD, ಮಾಜಿ ಸೈನಿಕರು ಹಾಗೂ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಸಂಪೂರ್ಣ ಉಚಿತ).
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ (UPI) ಮೂಲಕ ಪಾವತಿ ಮಾಡಬಹುದು. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಮರುಪಾವತಿಸಲಾಗುವುದಿಲ್ಲ.
ಆಯ್ಕೆ ಪ್ರಕ್ರಿಯೆ (Selection Process)
Western Railway ಅಪ್ರೆಂಟಿಸ್ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ನೇರವಾಗಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಯಾವುದೇ ಸಂದರ್ಶನವೂ ನಡೆಯುವುದಿಲ್ಲ.
ಮೆರಿಟ್ ಪಟ್ಟಿ ಸಿದ್ಧಪಡಿಸುವ ವಿಧಾನ
ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಶೇಕಡಾವಾರು ಅಂಕಗಳು (ಕನಿಷ್ಠ 50% ಕಡ್ಡಾಯ) ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳು, ಈ ಎರಡನ್ನೂ ಸಮಾನ ಪ್ರಾಮುಖ್ಯತೆಯಿಂದ ಪರಿಗಣಿಸಿ ಸರಾಸರಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು (Required Documents)
ಆನ್ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೆಳಗಿನ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ:
10ನೇ ತರಗತಿ (SSLC) ಅಂಕಪಟ್ಟಿ – ಜನ್ಮ ದಿನಾಂಕದ ಪುರಾವೆಗಾಗಿ.
ಎಲ್ಲಾ ಸೆಮಿಸ್ಟರ್ ವಿವರಗಳಿರುವ ಐಟಿಐ ಕನ್ಸಾಲಿಡೇಟೆಡ್ ಅಂಕಪಟ್ಟಿ.
NCVT ನೀಡಿದ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರ (National Trade Certificate).
ಜಾತಿ ಪ್ರಮಾಣಪತ್ರ (SC/ST/OBC ಅಭ್ಯರ್ಥಿಗಳಿಗೆ – ಕೇಂದ್ರ ಸರ್ಕಾರದ ನಮೂನೆಯಲ್ಲಿ).
EWS ಪ್ರಮಾಣಪತ್ರ (ಆರ್ಥಿಕವಾಗಿ ದುರ್ಬಲ ವರ್ಗದವರಿಗೆ – Annexure H ನಮೂನೆಯಲ್ಲಿ).
ಅಂಗವೈಕಲ್ಯ ಪ್ರಮಾಣಪತ್ರ (PwBD ಅಭ್ಯರ್ಥಿಗಳಿಗೆ).
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಬಣ್ಣದ ಫೋಟೋ.
ಅಭ್ಯರ್ಥಿಯ ಸಹಿ (Signature).
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (How to Apply Online?)
ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ಆನ್ಲೈನ್ ಅರ್ಜಿ ಸಲ್ಲಿಸಬಹುದು:
ಮೊದಲಿಗೆ Western Railway ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ https://www.rrc-wr.com ಗೆ ಭೇಟಿ ನೀಡಿ.
ಮುಖಪುಟದಲ್ಲಿ “Engagement of Apprentices for the year 2025-26” ಎಂಬ ಲಿಂಕ್ ಅನ್ನು ಹುಡುಕಿ, ಅದನ್ನು ಕ್ಲಿಕ್ ಮಾಡಿ.
ನೀವು ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಮೂಲಭೂತ ವಿವರಗಳು, ಮಾನ್ಯ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ 12 ಅಂಕಿಯ ಆಧಾರ್ ಸಂಖ್ಯೆಯನ್ನು ನೀಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. (ಆಧಾರ್ ಕಾರ್ಡ್ ಕಡ್ಡಾಯವಾಗಿದೆ.)
ನೋಂದಣಿ ನಂತರ ಲಾಗಿನ್ ಆಗಿ, ಆನ್ಲೈನ್ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು, ಐಟಿಐ ಟ್ರೇಡ್ ಮತ್ತು ನಿಮ್ಮ ಆಯ್ಕೆಯ ವಿಭಾಗ (Division/Workshop) ಅನ್ನು ಸರಿಯಾಗಿ ಆಯ್ಕೆ ಮಾಡಬೇಕು.
ಅಗತ್ಯ ದಾಖಲೆಗಳನ್ನು ಸೂಚಿಸಿದ ಗಾತ್ರ ಮತ್ತು ಫಾರ್ಮ್ಯಾಟ್ನಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿರಿ.
ಅರ್ಜಿಯಲ್ಲಿನ ಎಲ್ಲಾ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ (Preview), ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು (ರೂ. 100/-) ಆನ್ಲೈನ್ ಮೂಲಕ ಪಾವತಿಸಿ. (ಶುಲ್ಕ ವಿನಾಯಿತಿ ಇರುವ ಅಭ್ಯರ್ಥಿಗಳಿಗೆ ಪಾವತಿ ಅನ್ವಯಿಸುವುದಿಲ್ಲ.)
ಕೊನೆಯದಾಗಿ, ಅರ್ಜಿಯನ್ನು ‘Submit’ ಮಾಡಿ. ಭವಿಷ್ಯದಲ್ಲಿ ಉಪಯೋಗಕ್ಕೆ ಬರಬಹುದಾದ ಕಾರಣದಿಂದ ಅರ್ಜಿ ನಮೂನೆಯ ಪ್ರಿಂಟ್ಔಟ್ ಅನ್ನು ತೆಗೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ತರಬೇತಿ ಅವಧಿ ಮತ್ತು ಸ್ಟೈಪೆಂಡ್ (Training Period & Stipend)
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಸಂಬಂಧಿತ ನಿಯಮಾವಳಿಗಳ ಪ್ರಕಾರ ಮಾಸಿಕ ಸ್ಟೈಪೆಂಡ್ (ಭತ್ಯೆ) ನೀಡಲಾಗುತ್ತದೆ.
ತರಬೇತಿ ಅವಧಿಯಲ್ಲಿ ವಸತಿ ವ್ಯವಸ್ಥೆಯನ್ನು ಅಭ್ಯರ್ಥಿಗಳು ಸ್ವತಃ ನೋಡಿಕೊಳ್ಳಬೇಕು; ರೈಲ್ವೆ ಇಲಾಖೆಯ ವತಿಯಿಂದ ವಸತಿ ಸೌಲಭ್ಯ ಒದಗಿಸಲಾಗುವುದಿಲ್ಲ.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಸಂಬಂಧಿತ ರಾಷ್ಟ್ರೀಯ ಮಂಡಳಿಯಿಂದ ‘ಪ್ರಾವೀಣ್ಯ ಪ್ರಮಾಣಪತ್ರ’ (Certificate of Proficiency) ನೀಡಲಾಗುತ್ತದೆ.
ಪ್ರಮುಖ ನಿಯಮಗಳು ಮತ್ತು ನಿಬಂಧನೆಗಳು (Important Instructions)
ಅಭ್ಯರ್ಥಿಯ ಹೆಸರು, ತಂದೆಯ ಹೆಸರು ಹಾಗೂ ಜನ್ಮ ದಿನಾಂಕವು 10ನೇ ತರಗತಿ ಅಂಕಪಟ್ಟಿಯಲ್ಲಿ ಇರುವ ವಿವರಗಳಂತೆ ಅಚ್ಚುಕಟ್ಟಾಗಿ ಮತ್ತು ಯಾವುದೇ ವ್ಯತ್ಯಾಸವಿಲ್ಲದೆ ಇರಬೇಕು.
ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಮೂಲ ದಾಖಲೆಗಳನ್ನು ತೋರಿಸಲು ವಿಫಲರಾದರೆ ಅರ್ಜಿಗಳನ್ನು ರದ್ದು ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವೇಳೆ ಒಂದಕ್ಕಿಂತ ಹೆಚ್ಚು ವಿಭಾಗಗಳಿಗೆ ಅಥವಾ ಒಂದೇ ಟ್ರೇಡ್ಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೆ, ಅಂತಹ ಅಭ್ಯರ್ಥಿಯ ಎಲ್ಲಾ ಅರ್ಜಿಗಳನ್ನು ರದ್ದುಪಡಿಸಲಾಗುತ್ತದೆ.
ವೈದ್ಯಕೀಯ ಅರ್ಹತಾ ಪ್ರಮಾಣಪತ್ರವನ್ನು (Medical Fitness Certificate) ಸರ್ಕಾರದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಗೆಜೆಟೆಡ್ ವೈದ್ಯಾಧಿಕಾರಿಯಿಂದ (Assistant Surgeon ಗಿಂತ ಕಡಿಮೆ ಹುದ್ದೆಯಲ್ಲದವರು) ನಮೂನೆ–G ಪ್ರಕಾರ ಪಡೆದು ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು (Important Dates)
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಕೆಳಗಿನ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಅಗತ್ಯ:
ಅಧಿಕೃತ ಅಧಿಸೂಚನೆ ಪ್ರಕಟವಾದ ದಿನಾಂಕ: 18 ಫೆಬ್ರವರಿ 2026
ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ ಮತ್ತು ಸಮಯ: 21 ಫೆಬ್ರವರಿ 2026, ಬೆಳಿಗ್ಗೆ 11:00 ಗಂಟೆ
ಆನ್ಲೈನ್ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಮತ್ತು ಸಮಯ: 23 ಮಾರ್ಚ್ 2026, ಸಂಜೆ 5:00 ಗಂಟೆ
ವೆಬ್ಸೈಟ್ ವಿವರ : https://www.rrc-wr.com