ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, 2026ನೇ ಸಾಲಿನ ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಇದು ಪ್ರಮುಖ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು ಹುದ್ದೆಯ ಸ್ವರೂಪ, ವಿದ್ಯಾರ್ಹತೆ, ವೇತನ ಮತ್ತು ಅರ್ಜಿ ಸಲ್ಲಿಸುವ ವಿವರ, ಇತ್ಯಾದಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮುಂದುವರಿಯುವುದು ಅಗತ್ಯವಾಗಿದೆ.
ಹುದ್ದೆಗಳ ಮಾಹಿತಿ
ಈ ನೇಮಕಾತಿಯಡಿಯಲ್ಲಿ ವಿವಿಧ ತಾಂತ್ರಿಕ ಹಾಗೂ ನಿರ್ವಹಣಾ ವಿಭಾಗಗಳಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು ಲಭ್ಯವಿವೆ. ಅವುಗಳಲ್ಲಿ ಪ್ರಮುಖವಾಗಿ :
- ಸಾಫ್ಟ್‌ವೇರ್ ಡೆವೆಲಪರ್ (Software Developer)
- ಮೊಬೈಲ್ ಡೆವೆಲಪರ್ (Mobile Developer)
- ಡೇಟಾಬೇಸ್ ಆಡ್ಮಿನಿಸ್ಟ್ರೇಟರ್ (Database Administrator)
- ಡಿಜಿಟಲ್ ಚಾನೆಲ್ ಮ್ಯಾನೇಜರ್ / ಡಿಜಿಟಲ್ ಅಪ್ಲಿಕೇಶನ್ ಸ್ಪೆಷಲಿಸ್ಟ್
(Digital Channel Manager / Digital Application Specialist) - ಕ್ಲೌಡ್ ಮ್ಯಾನೇಜರ್ (Cloud Manager)
- ಡೇಟಾ ಆರ್ಕಿಟೆಕ್ಟ್ (Data Architect)
- ಡೇಟಾ ಇಂಜಿನಿಯರ್ (Data Engineer)
- ಡೇಟಾ ಸೈಂಟಿಸ್ಟ್ (Data Scientist)
- ಜನರೇಟಿವ್ ಎಐ (Gen AI) ತಜ್ಞರು
- ಐಟಿ ಆಫೀಸರ್ (IT Officer)
- ರಿಸ್ಕ್ ಮ್ಯಾನೇಜರ್ (Risk Manager)
- ಟ್ಯಾಕ್ಸೇಶನ್ ತಜ್ಞರು / ಚಾರ್ಟರ್ಡ್ ಅಕೌಂಟೆಂಟ್ (CA) ಸೇರಿದಂತೆ ಇತರೆ ಹುದ್ದೆಗಳು
(Tax Specialist / Chartered Accountant)
ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಪರಿಣತಿ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಖಾಲಿ ಹುದ್ದೆಗಳ ಸಂಖ್ಯೆ
ಒಟ್ಟು 275 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಈ ನೇಮಕಾತಿಯ ಮೂಲಕ ಭರ್ತಿ ಮಾಡಲಾಗುತ್ತಿವೆ.
ಕರ್ತವ್ಯ ಸ್ಥಳ
ಆಯ್ಕೆಯಾದ ಅಭ್ಯರ್ಥಿಗಳು ಭಾರತದ ವಿವಿಧ ಶಾಖೆಗಳು ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ನಿಯೋಜನೆ ಪಡೆಯಲಿದ್ದಾರೆ. ಹೀಗಾಗಿ ದೇಶದ ಯಾವುದೇ ಭಾಗದಲ್ಲಿ ಕೆಲಸ ನಿರ್ವಹಿಸಲು ಸಿದ್ಧತೆ ಅಗತ್ಯವಾಗಿದೆ.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವವರು ಹುದ್ದೆಗೆ ಅನುಗುಣವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.
- BE / B.Tech (ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಶನ್, ಇನ್ಫಾರ್ಮೇಶನ್ ಟೆಕ್ನಾಲಜಿ, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್, ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್)
- MCA
- BE / B.Tech (ಡೇಟಾ ಸೈನ್ಸ್, ಡೇಟಾ ಇಂಜಿನಿಯರಿಂಗ್, AI/ML)
- ಮಾಸ್ಟರ್ಸ್ ಡಿಗ್ರಿ (ಸ್ಟಾಟಿಸ್ಟಿಕ್ಸ್ / ಎಕಾನಾಮಿಕ್ಸ್)
- MBA / MMS (ಫೈನಾನ್ಸ್)
- ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಬ್ಯಾಂಕಿಂಗ್
- ಚಾರ್ಟರ್ಡ್ ಅಕೌಂಟೆಂಟ್ (CA)
ವಯೋಮಿತಿ (31/01/2026ರ ಕ್ಕೆ ಹೊಂದಿಕೆಯಾಗುವಂತೆ)
ಅಭ್ಯರ್ಥಿಗಳು 31 ಜನವರಿ 2026ರೊಳಗೆ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಹೊಂದಿರಬೇಕು:
| ಸ್ಕೇಲ್ | ಗರಿಷ್ಠ ವಯಸ್ಸು |
| ಸ್ಕೇಲ್ IV | 45 ವರ್ಷ |
| ಸ್ಕೇಲ್ III | 35 ವರ್ಷ |
| ಸ್ಕೇಲ್ II | 35 ವರ್ಷ |
| ಸ್ಕೇಲ್ I | 30 ವರ್ಷ |
ವಯೋಮಿತಿ ಸಡಿಲಿಕೆ:
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ಅಭ್ಯರ್ಥಿಗಳಿಗೆ – 5 ವರ್ಷ
- ಇತರೆ ಹಿಂದುಳಿದ ವರ್ಗ (OBC) ಅಭ್ಯರ್ಥಿಗಳಿಗೆ – 3 ವರ್ಷ
- ಪಿಡಬ್ಲ್ಯೂಬಿಡಿ (PwBD) ಅಭ್ಯರ್ಥಿಗಳಿಗೆ – 10 ವರ್ಷ
ವೇತನ ವಿವರ
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಸ್ಕೇಲ್‌ಗೆ ಅನುಗುಣವಾಗಿ ಕೆಳಗಿನ ವೇತನ ಶ್ರೇಣಿ ಅನ್ವಯವಾಗುತ್ತದೆ:
| ಹುದ್ದೆ | ವೇತನ ಶ್ರೇಣಿ |
| ಚೀಫ್ ಮ್ಯಾನೇಜರ್ (ಸ್ಕೇಲ್ IV) | ರೂ. 1,02,300 – ರೂ. 1,20,940 |
| ಸೀನಿಯರ್ ಮ್ಯಾನೇಜರ್ (ಸ್ಕೇಲ್ III) | ರೂ. 85,920 – ರೂ. 1,05,280 |
| ಮ್ಯಾನೇಜರ್ (ಸ್ಕೇಲ್ II) | ರೂ. 64,820 – ರೂ. 93,960 |
| ಅಸಿಸ್ಟೆಂಟ್ ಮ್ಯಾನೇಜರ್ (ಸ್ಕೇಲ್ I) | ರೂ. 48,480 – ರೂ. 85,920 |
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಆಧಾರದ ಮೇಲೆ ನಡೆಯಲಿದೆ:
- ಆನ್‌ಲೈನ್ ಪರೀಕ್ಷೆ
- ವೈಯಕ್ತಿಕ ಸಂದರ್ಶನ
ಪರೀಕ್ಷೆ ಮತ್ತು ಸಂದರ್ಶನದಲ್ಲಿ ಸಾಧನೆಯ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ.
ವೇತನ ಮತ್ತು ಸೌಲಭ್ಯಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕ್ ನಿಯಮಾನುಸಾರ ಸ್ಪರ್ಧಾತ್ಮಕ ವೇತನದ ಜೊತೆಗೆ ವಿವಿಧ ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ನಿವೃತ್ತಿ ಲಾಭಗಳು ಲಭ್ಯವಿರುತ್ತವೆ. ವೇತನದ ವಿವರಗಳು ಹುದ್ದೆಯ ಹಂತ ಮತ್ತು ಅನುಭವದ ಆಧಾರದ ಮೇಲೆ ನಿರ್ಧಾರವಾಗುತ್ತವೆ.
ಅರ್ಜಿ ವಿಧಾನ
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪ್ರಕಟಣೆಯನ್ನು ಗಮನದಿಂದ ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಸೂಕ್ತ.
ಆನ್‌ಲೈನ್ ಪರೀಕ್ಷೆಯ ಮಾದರಿ
ಆನ್‌ಲೈನ್ ಪರೀಕ್ಷೆಯಲ್ಲಿ ಒಟ್ಟು 75 ಪ್ರಶ್ನೆಗಳು ಇರಲಿದ್ದು, ಗರಿಷ್ಠ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಒಟ್ಟು ಅವಧಿ 90 ನಿಮಿಷಗಳು.
ವಿಭಾಗವಾರು ವಿವರ ಕೆಳಗಿನಂತಿದೆ:
1️⃣ ಸ್ಟ್ರೀಮ್ / ಕ್ಯಾಟಗರಿ ಸ್ಪೆಸಿಫಿಕ್ ಪ್ರಶ್ನೆಗಳು
2️⃣ ರೀಸನಿಂಗ್ (Reasoning Ability)
3️⃣ ಬ್ಯಾಂಕಿಂಗ್, ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾನ್ಯ ಜ್ಞಾನ
🔸 ಒಟ್ಟು ಪ್ರಶ್ನೆಗಳು: 75
- ಗರಿಷ್ಠ ಅಂಕಗಳು: 100
- ಒಟ್ಟು ಅವಧಿ: 90 ನಿಮಿಷಗಳು
ಪರೀಕ್ಷಾ ಕೇಂದ್ರಗಳು
ಆನ್‌ಲೈನ್ ಪರೀಕ್ಷೆ ಕೆಳಕಂಡ ನಗರಗಳಲ್ಲಿ ನಡೆಯಲಿದೆ:
ಬೆಂಗಳೂರು, ಧಾರವಾಡ, ಹುಬ್ಬಳ್ಳಿ ಹಾಗೂ ಮಂಗಳೂರು.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಕೇವಲ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆಯನ್ನು ಕೆಳಗಿನ ಹಂತಗಳ ಮೂಲಕ ಪೂರ್ಣಗೊಳಿಸಬೇಕು:
ಹಂತ 1:
ಮೊದಲು ಬ್ಯಾಂಕ್ ಪ್ರಕಟಿಸಿರುವ ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದಿ. ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು (ಶೈಕ್ಷಣಿಕ ಪ್ರಮಾಣಪತ್ರಗಳು, ಫೋಟೋ, ಸಹಿ ಇತ್ಯಾದಿ) ಸಿದ್ಧಪಡಿಸಿಕೊಳ್ಳಿ.
ಹಂತ 2:
ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನೀಡಿರುವ “Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಫಾರ್ಮ್ ತೆರೆಯಿರಿ.
ಹಂತ 3:
ಅರ್ಜಿ ಫಾರ್ಮ್‌ನಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು (ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ, ಇತ್ಯಾದಿ) ಸರಿಯಾಗಿ ಭರ್ತಿ ಮಾಡಿ. ಮುಂದಿನ ಹಂತಕ್ಕೆ ಸಾಗುವ ಮೊದಲು ನಮೂದಿಸಿದ ವಿವರಗಳನ್ನು ಪುನಃ ಪರಿಶೀಲಿಸಿ.
ಹಂತ 4:
ಅವಶ್ಯಕತೆ ಇದ್ದಲ್ಲಿ ಸೂಚಿಸಿದ ಪ್ರಮಾಣ ಪತ್ರಗಳು / ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಹಂತ 5:
ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಅರ್ಜಿ ಶುಲ್ಕ
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪಿಡಬ್ಲ್ಯೂಬಿಡಿ / ಮಹಿಳಾ ಅಭ್ಯರ್ಥಿಗಳು – ರೂ. 175
- ಇತರೆ ಅಭ್ಯರ್ಥಿಗಳು – ರೂ. 850
ಶುಲ್ಕ ಪಾವತಿ ವಿಧಾನ
ನಿಗದಿತ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಫೆಬ್ರುವರಿ 28, 2026
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಮಾರ್ಚ್ 23, 2026
- ಆನ್‌ಲೈನ್ ಪರೀಕ್ಷೆ: ಏಪ್ರಿಲ್ 2026
- ಸಂದರ್ಶನ ನಡೆಯುವ ದಿನಾಂಕ (ತಾತ್ಕಾಲಿಕ): ಏಪ್ರಿಲ್ 2026
- ವೆಬ್‌ಸೈಟ್ ಮಾಹಿತಿ : https://www.centralbank.bank.in/en
ಅಭ್ಯರ್ಥಿಗಳು ನಿಗದಿತ ದಿನಾಂಕಗಳೊಳಗೆ ಅರ್ಜಿ ಸಲ್ಲಿಸುವುದು ಅನಿವಾರ್ಯ.